ಶ್ರೀ ಗುರು ಸುಧೀಂದ್ರ ಬಿ.ಕಾಂ ಕಾಲೇಜು - ಉತ್ತಮ ಫಲಿತಾಂಶ.
ಕರ್ನಾಟಕ ವಿಶ್ವವಿದ್ಯಾಲಯದ 2021-22 ನೇ ಸಾಲಿನ 5ನೇ ಸೆಮಿಸ್ಟರ ಬಿ.ಕಾಂ ಪದವಿ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ.
ಪ್ರಜ್ವಲ ಗೋಳಿ ( 94.57%), ಕಾವ್ಯಾ ಆರ್ ನಾಯ್ಕ ( 94.29%), ಮೈಥಲಿ ನಾಯಕ ( 92.71%) ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ.
69 ಡಿಸ್ಟಿಂಕ್ಷನ್, 25 ಪ್ರಥಮ ದರ್ಜೆಯಲ್ಲಿ ತೇರ್ಗಡೆ ಗೊಂಡಿರುತ್ತಾರೆ.
10 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.
ಇವರ ಸಾಧನೆಯನ್ನು ಆಡಳಿತಮಂಡಳಿ, ಪ್ರಾಚಾರ್ಯರು, ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.
No comments:
Post a Comment