Friday, November 25, 2022

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ "ಯುವ ಮತದಾರರ ನೊಂದಣಿ" ಕಾರ್ಯಕ್ರಮಕ್ಕೆ ಚಾಲನೆ.

ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ "ಯುವ ಮತದಾರರ ನೊಂದಣಿ" ಕಾರ್ಯಕ್ರಮವನ್ನು ಭಟ್ಕಳ ತಹಸಿಲ್ದಾರರಾದ ಡಾ.ಸುಮಂತ ರವರು ವಿದ್ಯಾರ್ಥಿಗಳಿಗೆ ಡಾ.ವಿರುಪಾಕ್ಷ ದೇವರಮನೆಯವರ ಕ್ರಾಸ್ ರೋಡ್ಸ್-ಕಿಶೋರದ ಕವಲು ಹಾದಿ ಪುಸ್ತಕವನ್ನು ನೀಡುವುದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾದ ಶ್ರೀಮತಿ ಸುಶೀಲಾ, ಸಿ.ಡಿ.ಪಿ.ಓ ರವರು ಮಾತನಾಡಿ ಮತದಾರರ ಗುರುತು ಚೀಟಿಯ ಮಹತ್ವವನ್ನು ತಿಳಿಸಿದರು.
ಶ್ರೀ ಸುನಿಲ್, ಅಧಿಕಾರಿಗಳು ಮಾತನಾಡಿ ಗುರುತು ಚೀಟಿಯ ಪ್ರಕ್ರಿಯ ಕುರಿತು ಸವಿಸ್ತಾರ ಮಾಹಿತಿ ನೀಡಿದರು.
ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ಸಂಯೋಜಕರಾದ ಶ್ರೀ ಸುಬ್ರಹ್ಮಣ್ಯ ನಾಯ್ಕ ರವರು ವಿದ್ಯಾರ್ಥಿಗಳಿಗೆ ಮತದಾರರ ನೊಂದಣಿ ಅರ್ಜಿಯನ್ನು ವಿತರಿಸಿದರು.
ಕನ್ನಡ ಉಪನ್ಯಾಸಕಾರದ ಶ್ರೀ ಶಾಂತರಾಯ್ ಜಿ ರವರು ಕಾರ್ಯಕ್ರಮವನ್ನು ನಿರೂಪಿಸದರು.

No comments:

Post a Comment