Thursday, December 22, 2022

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ವಿದ್ಯಾರ್ಥಿ ಅಗ್ನಿವೀರನಾಗಿ ಆಯ್ಕೆ

ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಕುಮಾರ ಯೊಗೇಶ ಮೊಗೇರ ರನ್ನು  ಎಜುಕೇಶನ್ ಟ್ರಸ್ಟ'ನ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. "ನಿವೃತ್ತ ಸೈನಿಕರಾದ ಶ್ರೀ ನವೀನ ನಾಯ್ಕ ಹಾಗೂ ಸೈನಿಕರಾದ ಶ್ರೀ ಹರೀಶ ನಾಯ್ಕ ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಅಗ್ನಿವೀರನಾಗಿ ಆಯ್ಕೆಗೊಂಡಿದ್ದು ಸಂತಸ ತಂದಿದೆ, ಯುವಕ-ಯುವತಿಯರು ಅಗ್ನಿಪಥದ ಸದುಪಯೋಗವನ್ನು ಪಡೆದುಕೊಳ್ಳಬೇಕು" ಎಂದು ಅಗ್ನಿವೀರ ಯೊಗೇಶ ಮೊಗೇರ ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟ'ನ ಮ್ಯಾನೇಜಿಂಗ್ ಟ್ರಸ್ಟೀ ಶ್ರೀ ರವೀಂದ್ರ ಕೊಲ್ಲೆ ಯವರು ಮಾತನಾಡಿ "ವಿದ್ಯಾರ್ಥಿಗಳ 

ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಹಾಗೂ ಸಂಸ್ಥೆ ಶ್ರಮಿಸುತ್ತಿದ್ದು, ಶಿಕ್ಷಣದ ಜೊತೆಯಲ್ಲಿ ದೇಶಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕು" ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷ ಡಾ. ಸುರೇಶ ನಾಯಕ್ "ವಿದ್ಯಾರ್ಥಿಗಳಂತೆ ವಿದ್ಯಾರ್ಥಿನಿಯರೂ ಕೂಡ ಅಗ್ನಿಪಥ ಯೋಜನೆಯ ಸದುಪಯೋಗವನ್ನು ಪಡೆದು ಕೊಳ್ಳಬೇಕು, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು" ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್ ಅಗ್ನಿವೀರನಿಗೆ ಶುಭಕೋರಿದರು.

ಪ್ರಾಂಶುಪಾಲರಾದ ಶ್ರೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿವಿಧ ವಿಭಾಗದ ಉಪಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 

ಬಿ.ಕಾಂ ವಿಭಾಗದ ಉಪಪ್ರಾಂಶುಪಾಲರಾದ ಶ್ರೀ ಪಿ.ಎಸ್.ಹೆಬ್ಬಾರ ನಿರೂಪಿಸಿ ವಂದಿಸಿದರು 

No comments:

Post a Comment