Sunday, May 21, 2023

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಯಂಗ್ ರಿಸರ್ಚರ್ ಅವಾರ್ಡ್ ಪ್ರಧಾನ

21ನೇ ಶತಮಾನದ ನೂತನ ತಂತ್ರಜ್ಞಾನದ ಅನ್ವೇಷಣೆಯಿಂದ ಶಿಕ್ಷಣ ಕ್ಷೇತ್ರವು ಕ್ಷಿಪ್ರ ವಾಗಿ ಬದಲಾಗುತ್ತಿದ್ದು, ಫ್ಲಿಪ್ಪ್ಡ್ ಲರ್ನಿಂಗ್ ಕಲಿಕಾ ಮಾದರಿಯು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.
ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಅನುಷ್ಠಾನಗೊಳಿಸಲು ವಿಶೇಷ ಶೈಕ್ಷಣಿಕ ಸಾಧನದ ಅವಶ್ಯಕತೆಯನ್ನು ಅರಿತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಾಥ ಎಸ್ ಪೈ ಹಾಗೂ ಯುವ ತಂಡದ ಸದಸ್ಯರು ಫ್ಲಿಪ್ಪ್ಡ್ ಲರ್ನಿಂಗ್ ಕಂಟೆಂಟ್ 
ಡೆವೆಲೋಪರ್ - ಫ್ಲಿಪ್ಕಾಡ್ ಎಂಬ ಕೈಗೆಟಕುವ ಬೆಲೆಯ, ಡು ಇಟ್ ಯುವರಸೆಲ್ಫ್ ಮಾದರಿಯ ಪಠ್ಯ ತಯಾರಿಕಾ ಸಾಧನವನ್ನು ತಯಾರಿಸಿದರು. ಈ ಕುರಿತು ಸಮಗ್ರ ಮಾಹಿತಿಯ ಪ್ರಬಂಧವನ್ನು ಜರ್ನಲ್ ನಲ್ಲಿ ಮಂಡಿಸಿ, ವಿಶೇಷ ಬ್ಲಾಗ್ ರಚಿಸಿ ಶಿಕ್ಷಕರಿಗೆ ಮಾಹಿತಿನೀಡಿದರು. 
ಈ ಶೈಕ್ಷಣಿಕ ಸಂಶೋಧನೆಯನ್ನು ಪ್ರೋತ್ಸಾಹಿಸಿದ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಸ್ಕಾಲರ್ಸ್,ತನ್ನ ಮೆಂಬರ್ಸ ಗಳಿಗೆ ನೀಡುವ "ಯಂಗ್ ರಿಸರ್ಚರ್ ಅವಾರ್ಡ್" ನೀಡಿದೆ.

ಇದನ್ನು ಭಟ್ಕಳಕ್ಕೆ ಆಗಮಿಸಿದ ಪದ್ಮಶ್ರೀ ಡಾ.ಕಿರಣ ಸೆತ್ ರವರು ವಿತರಿಸಿ ಶುಭ ಕೋರಿದರು.

ಪ್ರಾಂಶುಪಾಲರಾದ ಶ್ರೀನಾಥ್ ಪೈ, ಉಪ ಪ್ರಾಂಶುಪಾಲರಾದ ವಿಶ್ವನಾಥ ಭಟ್ ರವರು ಕಾಲೇಜಿನ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

No comments:

Post a Comment