Thursday, October 26, 2023

ಶ್ರೀ ಗುರು ಸುಧೀಂದ್ರ ಕಾಲೇಜಿನ ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ.

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ನಡೆಸಿದ ಅಂತಿಮ ವರ್ಷದ 6ನೇ ಸೆಮೆಸ್ಟರ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಸಿಎ, ಬಿ.ಕಾಂ, ಬಿಬಿಎ ನಲ್ಲಿ ಅನುಕ್ರಮವಾಗಿ ಶೇ. 100, ಶೇ. 98.50, ಶೇ.96 ಫಲಿತಾಂಶ ಪಡೆದು ಸಾಧನೆಗೈಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಬಿಸಿಎ ವಿಭಾಗದ ವೀಣಾ ಪಟಗಾರ ಶೇ.95.40 ಪ್ರಥಮ, ದೀಕ್ಷಾ ಖಾರ್ವಿ ಶೇ.94.60 ದ್ವಿತೀಯ, ಆದಿತ್ಯ ನಾಯ್ಕ, ಕವನಾ ಭಟ್ಟ, ರಕ್ಷಾ ಫಾಯದೇ ಶೇ.94.00 ತೃತಿಯ ಸ್ಥಾನ ಗಳಿಸಿರುತ್ತಾರೆ.

ಬಿಕಾಂ ವಿಭಾಗದ ರಂಜಿತಾ ಭಟ್ಟ ಶೇ.97.14 ಪ್ರಥಮ, ರಂಜಿತಾ ನಾಯ್ಕ ಶೇ.95.57 ದ್ವಿತೀಯ, ಗಜೇಂದ್ರ ನಾಯ್ಕ ಶೇ.95.00 ತೃತಿಯ ಸ್ಥಾನ ಗಳಿಸಿರುತ್ತಾರೆ.

ಬಿಬಿಎ ವಿಭಾಗದ ವೃಂದಾ ಜೋಗಿ ಶೇ.93.67 ಪ್ರಥಮ, ಎಲ್ವಿಯಾ ಡಿಸೋಜಾ ಶೇ.93.33 ದ್ವಿತೀಯ, ನಿಶಾ ಮಚಾಡೋ ಶೇ.89.83 ತೃತಿಯ ಸ್ಥಾನ ಗಳಿಸಿರುತ್ತಾರೆ.

ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷರಾದ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ಶ್ರೀ ರಾಜೇಶ ಬಿ ನಾಯಕ, ಟ್ರಸ್ಟಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. 


No comments:

Post a Comment