Wednesday, June 26, 2024

SPL 2024 ಪ್ರೀಮಿಯರ್ ಲೀಗ್ ಟೂರ್ನಿ - ಕ್ರೀಡಾಪಟುಗಳನ್ನು ಹುರಿದುಂಬಿಸಿದ ಹಳೆಯ ವಿದ್ಯಾರ್ಥಿ ಶ್ರೀ ರಾಘವೇಂದ್ರ ಶೇಟ್



ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ವರ್ಷಂಪ್ರತಿ ಜರುಗುವ ಶ್ರೀ ಗುರು ಸುಧೀಂದ್ರ ಕಾಲೇಜು ಪ್ರೀಮಿಯರ್ ಲೀಗ್ ಟೂರ್ನಿಯು ವಿಜೃಂಭಣೆಯಿಂದ ಜರುಗಿತು.

ಕಾಲೇಜಿನ ಬಿ.ಎ ವಿಭಾಗದ ಸಕ್ರೀಯ ವಿದ್ಯಾರ್ಥಿ, ಉತ್ತಮ ಕ್ರೀಡಾಪಟು ಎನಿಸಿಕೊಂಡಿದ್ದ ಹಳೆಯ ವಿದ್ಯಾರ್ಥಿ ಹಾಲಿ ಉದ್ಯಮಿ ಶ್ರೀ ರಾಘವೇಂದ್ರ ಶೇಟ್ ರವರು ಪಂದ್ಯವನ್ನು ಉದ್ಘಾಟಿಸಿದರು. ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತಾ, ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ವರುಣನ ಕೃಪೆಯಿಂದ ಮೂರು ದಿನಗಳಕಾಲ 8 ಲೀಗ್ ಪಂದ್ಯಗಳೂ ಸೇರಿ 11 ಪಂದ್ಯಗಳು ಸಾಂಘವಾಗಿ ಜರುಗಿದವು.










ಪೈನಲ್ ಪಂದ್ಯದ ಬಳಿಕ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಾಲೇಜಿನ ಬಿ.ಕಾಮ್ ವಿಭಾಗದ ಹಳೆಯ ವಿದ್ಯಾರ್ಥಿ ದುಬೈ ನಲ್ಲಿ ಕ್ರೀಡಾಪಟು ಆಗಿರುವ ಶ್ರೀ ಚರಣರಾಜ್ ರವರು ಬಹುಮಾನ ವಿತರಿಸಿ "ವಿದ್ಯಾರ್ಥಿಗಳು ಪದವಿ ವ್ಯಾಸಂಗದ ಜೊತೆ ಜೊತೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಬೇಕು, ನಮ್ಮ ಕಾಲೇಜು ಯುವ ಸಬಲೀಕರಣಕ್ಕೆ ಪೂರಕವಾದ ಕ್ರೀಡೆಗೆ ವಿಶೇಷ ಮಹತ್ವವನ್ನು ನೀಡುತ್ತಿದ್ದು, ನಿರಂತರವಾಗಿ Khelo SGSC, SPL ಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ನಿರ್ಮಿಸಿ ಕೊಡುತ್ತಿದೆ" ಎಂದರು.

ಅಂಪೈರಸ್, ಟೂರ್ನಿ ಸಂಯೋಜಕರಿಗೆ ವಿಶೇಷ ಸ್ಮರಣಿಕೆಯನ್ನು ನೀಡಿ ಪ್ರಶಂಸಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿಗಳು, ಶ್ರೀ ವಿನಾಯಕ ನಾಯ್ಕ ದೈಹಿಕ ಶಿಕ್ಷಣ ನಿರ್ದೇಶಕರು, ರಾಷ್ಟ್ರೀಯ ಮಟ್ಟದ GPL ಆಟಗಾರರಾದ ಶ್ರೀ ವಿಘ್ನೇಶ್ ಪ್ರಭು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

No comments:

Post a Comment