ಭಟ್ಕಳ ಜೂಲೈ ೦೩: "ಮಾಧ್ಯಮವು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರಸ್ತಂಭವಾಗಿದ್ದು ಇದು ಜನರಿಗೆ ಹೊಸ ವಿಷಯಗಳನ್ನು, ಮಾಹಿತಿಯನ್ನು ತಿಳಿಸುವ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವ ಉತ್ತಮ ವೇದಿಕೆಯಾಗಿದೆ" ಎಂದು ಇಡಗುಂಜಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೊಸಬಯ್ಯ ಪಟಗಾರ ಹೇಳಿದರು.ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ಬಿಏ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲ್ಪಟ್ಟ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಸ್ತುಪ್ರದರ್ಶನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು "ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸುವಲ್ಲಿ ಪತ್ರಿಕೋದ್ಯಮದ ಪಾತ್ರ ಗುರುತರ" ಎಂದರು. ಭಟ್ಕಳ ತಾಲೂಕಿನ ಹಿರಿಯ ಪತ್ರಕರ್ತರಾದ ಶ್ರೀ ರಾಧಾಕೃಷ್ಣ ಭಟ್ ರವರು ಮಾತನಾಡಿ ಪತ್ರಿಕೋದ್ಯಮದ ಸಮಗ್ರ ಚಿತ್ರಣವನ್ನು ಒಂದೇ ಸೂರಿನಡಿಯಲ್ಲಿ ಪ್ರದರ್ಶಿಸಿರುವುದು ಗಮನಾರ್ಹವಾದದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ ನ ಟ್ರಸ್ಟೀ ರಮೇಶ್ ಖಾರ್ವಿ ಮಾತನಾಡಿ ವಸ್ತು ಪ್ರದರ್ಶನದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ವಿದ್ಯಾರ್ಥಿಗಳ ಪರಿಶ್ರಮವನ್ನು ಶ್ಲಾಘಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾರ್ಥಿಗಳಾದ ಕಪಿಲ್ ಭಟ್ ಹಾಗೂ ಲಿಧಿಯಾ ನಿರೂಪಿಸಿದರು. ಇಶಿತಾ ನಾಯ್ಕ್ ವಂದಿಸಿದರು. ಈ ಸಂಧರ್ಭದಲ್ಲಿ ವಿವಿಧ ವಿಭಾಗದ ಉಪ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗು ಭಟ್ಕಳ ತಾಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.
Wednesday, July 3, 2024
ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಸ್ತುಪ್ರದರ್ಶನ

Subscribe to:
Post Comments (Atom)
-
ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬಯಿನ ಖ್ಯಾತ ಫ್ರೀಡಂ ಅಫ್ ಫ್ರೀ ಎಂಟರಪ್ರೆöÊಸೆಸ್ ನ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪದವಿ ಪ್ರಥಮ ವರ್ಷದ ವಿದ್...
-
ಭಟ್ಕಳ : ಕರ್ನಾಟಕ ವಿಶ್ವವಿದ್ಯಾನಿಲಯವು ಕಳೆದ ಜನವರಿ ತಿಂಗಳಲ್ಲಿ ಜರುಗಿಸಿದ 2024-25 ನೇ ಸಾಲಿನ 5ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್...
-
ಭಟ್ಕಳ: ಅಕೌಂಟ್ಸ್ ಹಬ್ ಎಂದು ಪ್ರಖ್ಯಾತ ವಾಗಿರುವ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ CA, CS ಅನ್ನು ಪೂರೈಸಿದ ಹಳೆಯ ವಿದ್ಯಾರ್ಥಿಗಳು ಹಾಗೂ ತರಬೇತಿ ಸಂಸ್ಥೆಗಳ ಮಾರ್ಗದ...
No comments:
Post a Comment