Saturday, August 10, 2024

“ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ - ಯುವಕರಿಗೆ ಮಾರ್ಗದರ್ಶನ ” ಫಲಕ ಅನಾವರಣ

ಭಟ್ಕಳ: ಶ್ರೀ ಸಂಸ್ಥಾನ ಕಾಶೀಮಠದ 20 ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದ ಆರಾಧನಾ ಮಹೋತ್ಸವದ ಅಂಗವಾಗಿ ಅಗಷ್ಟ ತಿಂಗಳ ಶ್ರಾವಣ ಮಾಸದ-ಸ್ವಾತಿ ನಕ್ಷತ್ರ 11.08.2024 ರಂದು ಭಟ್ಕಳದ ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ "ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ-ಯುವಕರಿಗೆ ಮಾರ್ಗದರ್ಶನ" ಫಲಕವನ್ನು ಅನಾವರಣ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುರೇಶ ನಾಯಕ ರವರು ಮಾತನಾಡಿ "Youth of GSB"  ಇದರ ವಿಶ್ವವ್ಯಾಪಿ ಮಾಸಿಕ ಪತ್ರಿಕೆಯಲ್ಲಿನ ಲೇಖನದ ಆಯ್ದ 10 ಅಂಶಗಳನ್ನು ಕ್ರೋಡಿಕರಿಸಿ ರಚಿಸಿದ ಈ ಫಲಕದಲ್ಲಿನ ಪರಮ ಪೂಜ್ಯ ಗುರುವರ್ಯರ ಪ್ರೇರಣಾದಾಯಿ ಮಾರ್ಗದರ್ಶನವನ್ನು ಯುವ ವಿದ್ಯಾರ್ಥಿಗಳು ಮನನ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಉಪ-ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Courtesy: 





No comments:

Post a Comment