Thursday, May 26, 2022

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ.

 ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ.

ಭಟ್ಕಳ ಮೇ 26: "ಪ್ರಭಲ ಮನಸ್ಸನ್ನು ಹೊಂದಬೇಕಾದರೆ ಪ್ರಭಲ ದೇಹವು ಅಗತ್ಯ, ಆದುದರಿಂದ ಯುವ ಜನತೆ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಪ್ರಭಲ ದೇಹ ಮತ್ತು ಮನಸನ್ನು ಹೊಂದಬೇಕು" ಎಂದು ಶೋಟೊಕಾನ್ ಕರಾಟೆ ಸಂಸ್ಥೆಯ ತರಬೇತುದಾರ ಈಶ್ವರ್ ನಾಯ್ಕ್ ಆಸರಕೇರಿಯವರು ಹೇಳಿದರು. 

ನಗರದ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ 2021-22 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ "ಖೇಲೊ ಎಸ್.ಜಿ.ಯಸ್.ಸಿ" ಯನ್ನು ಕ್ರೀಡಾ ಜ್ಯೋತಿ ಸ್ವೀಕರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ವಿ. ನಾಯಕ ಕ್ರೀಡಾಳುಗಳಿಗೆ ಶುಭ ಹಾರೈಸಿ ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಆಟದ ಮೈದಾನ ಹಾಗೂ ಇತರ ಮೂಲಭೂತ ಸೌಕರ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಪ್ರಾಶುಪಾಲ ಪ್ರೊ. ಶ್ರೀನಾಥ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಾಣಿಜ್ಯ ವಿಭಾಗದ ಉಪಪ್ರಾಂಶುಪಾಲ ಪ್ರೊ. ಫಣಿಯಪ್ಪಯ್ಯ ಹೆಬ್ಬಾರ್ ಸ್ವಾಗತಿಸಿದರು, ಕಲಾ ಮತ್ತು ನಿರ್ವಹಣಾ ವಿಭಾಗದ ಉಪ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಭಟ್ 'ಕೋಸ್ಟಲ್ ಟು ಗ್ಲೋಬಲ್' ಅಭಿಯಾನವನ್ನು ಪರಿಚಯಿಸಿದರು, ಉಪನ್ಯಾಸಕರುಗಳಾದ ದೇವೇಂದ್ರ ಕಿಣಿ ಕ್ರೀಡಾ ಪ್ರತಿಜ್ಞೆ ಭೋದಿಸಿದರು ಮತ್ತು ಆನಂದ್ ದೇವಾಡಿಗ ವಂದಿಸಿದರು. ವಿದ್ಯಾರ್ಥಿನಿ ರೋಜಾ ಬಂಢಾರಿ ನಿರೂಪಿಸಿದರು.
ಕ್ರೀಡಾ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಳಿಗಾಗಿ ಈಶ್ವರ್ ನಾಯ್ಕ್ ಅವರನ್ನು ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ವಿನಾಯಕ್ ನಾಯ್ಕ್ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


No comments:

Post a Comment