Tuesday, June 14, 2022

ಭಟ್ಕಳ ರೋಟರಾಕ್ಟ್ ಕ್ಲಬ್ ನ 2021-22ನೇ ಸಾಲಿನ ಜಿಲ್ಲಾ ಪ್ರತಿನಿಧಿಗಳ ಭೇಟಿ ಕಾರ್ಯಕ್ರಮವು ನಗರದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಜರುಗಿತು.

21ನೇ ಶತಮಾನದಲ್ಲಿ ಯುವಜನತೆ ಅಳವಡಿಸಿಕೊಳ್ಳಬೇಕಾದ ನಾಲ್ಕು ವಿಶೇಷ ಕೌಶಲ್ಯಗಳನ್ನು ಹೊಂದಿದ ಕೌಶಲ್ಯ ವೃತ್ತವನ್ನು ಉದ್ಘಾಟಿಸಿ, ಕ್ಲಬ್ ನ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಪರಿಶೀಲಿಸಿ ಮಾತನಾಡಿದ ರೋಟರಾಕ್ಟ್ ಜಿಲ್ಲೆ 3170ನ ಜಿಲ್ಲಾ ಪ್ರತಿನಿಧಿ ವಿಶಾಖಾ ಪೆಡ್ನೇಕರ್, "ಭಟ್ಕಳದ ರೋಟರಾಕ್ಟ್ ಕ್ಲಬ್ ಕುಮಟಾ ವಲಯದಲ್ಲಿ ಅತ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಲಬ್ ಗಳಲ್ಲಿ ಒಂದಾಗಿದ್ದು ನೇತ್ರದಾನದ ಕುರಿತು ಜಾಗೃತಿ ಅಭಿಯಾನ, ಸಿ ಫಾರ್ ಕ್ಲೀನ್ ಕ್ಯಾಂಪಸ್, ತಂಬಾಕುವಿನ ಕುರಿತು ಜಾಗೃತಿ ಅಭಿಯಾನ ಮುಂತಾದ ಕಾರ್ಯಕ್ರಮಗಳ ಮೂಲಕ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ" ಎಂದರು. 

ಬಳಿಕ ಜಿಲ್ಲಾ ಪ್ರತಿನಿಧಿಗಳ ಸಹಾಯಕ ರೋಟರಾಕ್ಟರ್ ಸಾರ್ಥಕ್ ಶಿರೋಡ್ಕರ್ ಮಾತನಾಡಿ, "ರೋಟರಾಕ್ಟ್ ಕ್ಲಬ್ ನ ಚಟುವಟಿಕೆಗಳು ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಗುಣ ಬೆಳೆಸಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದ್ದು ಈ ಅವಕಾಶವನ್ನು ಯುವಜನತೆ ಬಳಸಿಕೊಳ್ಳಬೇಕು" ಎಂದರು. 

ಭಟ್ಕಳ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀನಿವಾಸ್ ಪಡಿಯಾರ್, ಭಟ್ಕಳ ಎಜುಕೇಶನ್ ಟ್ರಸ್ಟ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್, ಪ್ರಾಂಶುಪಾಲ ಪ್ರೊ. ಶ್ರೀನಾಥ್ ಪೈ, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಪ್ರೇಮಾನಂದ್ ನಾಯ್ಕ್ ಸ್ವಾಗತಿಸಿದರು, ತೇಜಸ್ವಿನಿ ನಾಯ್ಕ್ ನಿರೂಪಿಸಿದರು ಮತ್ತು ಕಾರ್ಯದರ್ಶಿ ರಶ್ಮಿ ಮಹಾಲೆ ವಂದಿಸಿದರು.


No comments:

Post a Comment