85 ವರ್ಷದ ಅಪ್ಪಟ ದೇಶಪ್ರೇಮಿ ಇಂಡಿಯಾ ಪೋಸ್ಟ್ ನ ಪೋಸ್ಟ ಮನ್ ಶ್ರೀ ನಾರಾಯಣ ಪೈ ರವರು ಭಾರತದ 75 ನೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಸಲುವಾಗಿ ನಿರ್ಮಿಸಿದ ಜ್ಞಾನ ಗೋಪುರ ವನ್ನು ಉದ್ಗಾಟಿಸಿದರು.
ಭಾರತೀಯ ಅಂಚೆ ಯಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಕಳೆದ ಹತ್ತು ವರ್ಷಗಳಿಂದ
ಪ್ರತಿ ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭದಲ್ಲಿ ತಾಲೂಕಿನ ಶಾಲಾ ಕಾಲೇಜು ಗಳಿಗೆ ಸ್ವಾತಂತ್ರ್ಯ ದಿನಾಚರಣೆ ಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿತರಿಸಲು ಸಿಹಿತಿಂಡಿಯನ್ನು ತಮ್ಮ ಪಿಂಚಣಿ ಹಣದಿಂದ ನೀಡುತ್ತಾ ಬಂದಿರುವರು.
ಇವರ ಈ ವಿಶೇಷ ದೇಶ ಪ್ರೇಮಕ್ಕೆ ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ
ಗೌರವ ಸಮರ್ಪಿಸಿರುವರು.
ಭಟ್ಕಳದ ಶ್ರೀ ಗುರು ಸುಧೀoದ್ರ ಕಾಲೇಜಿನ ಆವರಣದಲ್ಲಿ ನಿರ್ಮಿಸಿದ ಜ್ಞಾನ ಗೋಪುರವನ್ನು
75 ನೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ದ ಸಲುವಾಗಿ
ಅಮೃತ ಜ್ಞಾನ ವೆಂಬ ವಿಶೇಷ ಥೀಮ್ ಅಡಿಯಲ್ಲಿ ನಿರ್ಮಿಸಲಾಯಿತು.
Amrit Mahotsav Websites , Har Ghar Tiranga ಮುಂತಾದ ಅಮೃತ ಮಹೋತ್ಸವ ವಿಶೇಷ ಮಾಹಿತಿಯನ್ನು ಇಲ್ಲಿ ಅಳವಡಿಸಲಾಗಿದೆ.
No comments:
Post a Comment