Monday, August 8, 2022

ಸೈಬರ್ ಅಪರಾಧದ ಕುರಿತು ಮಾಹಿತಿ ಕಾರ್ಯಾಗಾರ

"ಇಂದಿನ ವರ್ಚುಯಲ್ ಪ್ರಪಂಚದಲ್ಲಿ ಸೈಬರ್ ಅಪರಾಧಿಗಳ ಮೋಸದ ಬಲೆಗೆ ಸಿಲುಕಿ ಯುವಜನತೆ ಲೈಂಗಿಕ ಮತ್ತು ಆರ್ಥಿಕ ಶೋಷಣೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದು, ಇದನ್ನು ತಡೆಯುವ ಅವಶ್ಯಕತೆ ಇದೆ" ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ತಜ್ಞ ಶಶಿಧರ ಪಟಗಾರ ಹೇಳಿದರು. 

ನಗರದ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದಲ್ಲಿ ಭಟ್ಕಳ ಪೊಲೀಸ್ ಇಲಾಖೆ ಹಾಗೂ ರೋಟರಾಕ್ಟ್ ಕ್ಲಬ್‌ನ ಸಹಭಾಗಿತ್ವದಲ್ಲಿ ಆಯೋಜಿಸಲ್ಪಟ್ಟ ಸೈಬರ್ ಅಪರಾಧದ ಕುರಿತಾದ ಮಾಹಿತಿ ಕಾರ್ಯಾಗಾರವನ್ನು 'ಸೈಬರ್ ಸೇಫ್ ಗರ್ಲ್ ಭೇಟಿ ಬಚಾವೋ ಸೈಬರ್ ಕ್ರೈಂ ಸೆ ೫.೦' ಭಿತ್ತಿ ಪತ್ರವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು "ಇಂದು ಸಾಮಾಜಿಕ ಮಾಧ್ಯಮಗಳು ಕಳ್ಳರಿಗೆ ಹಣ ಸಂಪಾದನೆ ಮಾಡುವ ಹಾಗೂ ಸಮಾಜ ಘಾತುಕ ಶಕ್ತಿಗಳಿಗೆ ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸುವ ಸಾಧನಗಳಾಗುತ್ತಿದ್ದು ಇವುಗಳ ಬಳಕೆಗೆ ಸಂಭAದಿಸಿದ ಹಾಗೆ ಜಾಗರೂಕತೆ ಅವಶ್ಯಕ" ಎಂದರು. ಬಳಿಕ ಭಟ್ಕಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಮಾ ಬಿ ಮಾತನಾಡಿ, "ಸೈಬರ್ ವಂಚನೆಗೆ ಒಳಗಾದವರು ತನಿಖೆಗೆ ಸಹಕರಿಸಿದರೆ ಸೈಬರ್ ಅಪರಾಧವನ್ನು ಬುಡ ಸಮೇತ ಕೀಳಲು ಸಾಧ್ಯವಿದೆ" ಎಂದರು. 

ಮಹಾವಿದ್ಯಾಲದ ಪ್ರಾಂಶುಪಾಲ ಪ್ರೊ. ಶ್ರೀನಾಥ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕ್ಲಬ್ ಅಧ್ಯಕ್ಷ ಪ್ರೇಮಾನಂದ ನಾಯ್ಕ್ ಸ್ವಾಗತಿಸಿದರು, ವಿನಯ್ ಆಚಾರ್ಯ ನಿರೂಪಿಸಿದರು ಮತ್ತು ಪಲ್ಲವಿ ಜೈನ ವಂದಿಸಿದರು. 

ಈ ಸಂಧರ್ಭದಲ್ಲಿ ಠಾಣೆಯ ಹಿರಿಯ ಆರಕ್ಷಕ ಮಾರುತಿ ಜೆ ನಾಯ್ಕ್, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ, ಇಲಾಖೆ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. 


No comments:

Post a Comment