Saturday, August 13, 2022

ರೋಟರಾಕ್ಟ್ ಮತ್ತು ಇಂಟರಾಕ್ಟ್ ಪದಗ್ರಹಣ ಸಮಾರಂಭ

ಭಟ್ಕಳ ಆಗಸ್ಟ್ 13: "ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಾಗ ಮಾತ್ರ ಅವರಲ್ಲಿ ದೇಶದ ಬಗ್ಗೆ ಕಾಳಜಿ ಮೂಡುತ್ತದೆ" ಎಂದು ರೋಟಾರಿಯನ್ ಅನಂತಮೂರ್ತಿ ಶಾಸ್ತ್ರೀ ಹೇಳಿದರು. 

ನಗರದ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ ಘಟಕವಾದ ರೋಟರಾಕ್ಟ್ ಕ್ಲಬ್ ಹಾಗೂ ಆನಂದಾಶ್ರಮ, ಶ್ರೀವಲಿ ಹಾಗೂ ವಿದ್ಯಾಂಜಲಿ ಶಾಲೆಯ ಇಂಟರಾಕ್ಟ್ ಕ್ಲಬ್‌ಗಳ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, "ಪ್ರಪಂಚದ 180 ದೇಶಗಳಲ್ಲಿ ಸುಮಾರು ಹನ್ನೊಂದು ಸಾವಿರ ರೋಟರಾಕ್ಟ್ ಕ್ಲಬ್‌ಗಳಿದ್ದು ಅವು ಎರಡು ಲಕ್ಷ ಸದಸ್ಯರನ್ನು ಹೊಂದಿವೆ ಮತ್ತು ಅವರೆಲ್ಲರೂ ತಮ್ಮ ಸೇವೆಯ ಮೂಲಕ ಇತರರ ಜೀವನದಲ್ಲಿ ಬದಲಾವಣೆಯನ್ನು ತರಲು ಪರಿಶ್ರಮಿಸುತ್ತಿದ್ದಾರೆ" ಎಂದರು. ಈ ಸಂಧರ್ಭದಲ್ಲಿ ಅಂತಾರಾಷ್ಟ್ರೀಯ ಯುವದಿನಾಚರಣೆಯ ಪ್ರಯುಕ್ತ ದೈಹಿಕ ಸದೃಡತೆಯ ಕುರಿತು ಅರಿವು ಮೂಡಿಸಲು ಕರ್ನಾಟಕದಿಂದ ಕಾಶ್ಮೀರದವರೆಗೆ ಏಕಾಂಗಿ ನಡಿಗೆಯ  ಮೂಲಕ ಸಂಚರಿಸಿ ಸಾಧನೆಗೈದ ಮತ್ತು ಪರಿಸರ ರಕ್ಷಣೆಯ ಜಾಗೃತಿಗಾಗಿ ಕೇರಳದಿಂದ ಸಿಂಗಾಪುರದವರೆಗೆ ಸೈಕಲ್‌ನಲ್ಲಿ ತೆರಳಲಿರುವ ಹರ್ಷೇ೦ದ್ರ ಹಾಗೂ ಮಹಿಳಾ ಸಬಲೀಕರಣದ ಕುರಿತು ಜಾಗೃತಿ ಮೂಡಿಸಲು ಕರ್ನಾಟಕದಿಂದ ಕಾಶ್ಮೀರದವರೆಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಸಾಧನೆಗೈದ ಸಾಕ್ಷಿ ಅವರನ್ನು ಸನ್ಮಾನಿಸಲಾಯಿತು. 

ರೋಟರಿ ಅಧ್ಯಕ್ಷ ಶ್ರೀನಿವಾಸ್ ಪಡಿಯಾರ್ ಮತ್ತು ಕಾರ್ಯದರ್ಶಿ ರಾಜೇಶ್ ನಾಯಕ್,ರೋಟರಾಕ್ಟ್ ಮತ್ತು ಇಂಟರಾಕ್ಟ್ ಕ್ಲಬ್ಬುಗಳ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ರೋಟರಿ ಖಜಾಂಚಿ ಇಸ್ತಿಯಾಕ್  ಹಸ್ಸನ್, ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಶ್ರೀನಾಥ್ ಪೈ, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ, ರೋಟರಾಕ್ಟ್ ನಿಕಟಪೂರ್ವ ಅಧ್ಯಕ್ಷ ಪ್ರೇಮಾನಂದ ನಾಯ್ಕ್, ನಿಕಟಪೂರ್ವ ಕಾರ್ಯದರ್ಶಿ ರಶ್ಮಿ ಮಹಾಲೆ ಉಪಸ್ಥಿತರಿದ್ದರು. ರೋಟರಾಕ್ಟ್ ಅಧ್ಯಕ್ಷೆ ತೇಜಸ್ವಿನಿ ನಾಯ್ಕ್ ಸ್ವಾಗತಿಸಿದರು, ಉಪಾಧ್ಯಕ್ಷೆ ಪ್ರೇರಣಾ ಶೇಟ್ ನಿರೂಪಿಸಿದರು ಹಾಗೂ ಕಾರ್ಯದರ್ಶಿ ಪಲ್ಲವಿ ಜೈನ ವಂದಿಸಿದರು.


No comments:

Post a Comment