ಭಟ್ಕಳ: ಕವಿವಿ ಧಾರವಾಡ ಇವರು ನಡೆಸಿದ ಬಿಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗುವುದರೊಂದಿಗೆ 100% ಫಲಿತಾಂಶ ದಾಖಲಾಗಿದೆ. ಕುಮಾರಿ. ಸೀಮಾ ನಾಯ್ಕ ಶೇ.91.2, ಕುಮಾರ ರಾಹುಲ ಶಿರೂರಕರ ಶೇ.90.50, ಕುಮಾರಿ.ಅನಿತಾ ನಾಯ್ಕ ಹಾಗೂ ಕುಮಾರಿ.ಸಿಂಧು ಮೊಗೇರ ಶೇ.85.7 ಅಂಕ ಪಡೆದು ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಈ ಸಾಧನೆಗೆ ಎಲ್ಲ ವಿದ್ಯಾರ್ಥಿಗಳನ್ನು ಭಟ್ಕಳ ಎಜುಕೇಶನ್ ಟ್ರಸ್ಟ'ನ ಆಡಳಿತ ಮಂಡಳಿಯವರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಶೇ.100 ಸಾಧನೆ
No comments:
Post a Comment