ಕನ್ನಡ ರಾಜ್ಯೋತ್ಸವದ ಪ್ರಯುಕ್ತ "ಪುನಿತ ರಾಜಕುಮಾರ ಚಲಿಸುವ ಭಾಷಾ ಪ್ರಯೋಗಾಲಯ"ಕ್ಕೆ ಕನ್ನಡ ಜಾನಪದ ಗೀತೆಗಳ ಗುಚ್ಚವನ್ನು ಪ್ರಸರಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನನ ಉತ್ತರ ಕನ್ನಡ ಜಿಲ್ಲೆಯ ತರಬೇತಿ ಮುಖ್ಯಸ್ಥರಾದ ಶ್ರೀ ಶ್ರೀನಿವಾಸ ನಾಯ್ಕ ಡಿಜಿಟಲ್ ಮಾದರಿಯಲ್ಲಿ ಚಾಲನೆಯನ್ನು ನೀಡಿದರು. ಮಾತೆ ಹಾಗೂ ಮಾತೃಭಾಷೆಯನ್ನು ಗೌರವಿಸುವುದು ಅತಿ ಮುಖ್ಯ, ವಿದ್ಯಾರ್ಥಿಗಳು ಭಾಷಾ ಪ್ರಭುತ್ವವನ್ನು ಹೊಂದಬೇಕು ಎಂದು ಹೇಳಿದರು.
ಪ್ರಾಚಾರ್ಯ ಶ್ರೀನಾಥ ಪೈ ರವರು ಚಲಿಸುವ ಭಾಷಾ ಪ್ರಯೋಗಾಲಯದ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು.
ಉಪ ಪ್ರಾಂಶುಪಾಲರಾದ ಪಿ.ಎಸ್.ಹೆಬ್ಬಾರ್, ವಿಶ್ವನಾಥ ಭಟ್, ದೈಹಿಕ ಶಿಕ್ಷಣ ನಿರ್ದೇಶಕರಾದ ವಿನಾಯಕ ನಾಯ್ಕ, ಉಪನ್ಯಾಸಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕರಾದ ಆನಂದ ದೇವಾಡಿಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
No comments:
Post a Comment