Sunday, November 6, 2022

SGSC ಸಪ್ತಸ್ವರ ಸಂಗೀತ ತಂಡ

 ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮದ ಮಾಲೇಕೊಡ್ಲು ಶ್ರೀ ಲಕ್ಶ್ಮೀ ನಾರಾಯಣ ದೇವಸ್ಥಾನದಲ್ಲಿ ಕಾರ್ತಿಕ ಏಕಾದಶಿಯಂದು ಆಯೋಜಿಸಲಾದ ಅಖಂಡ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷರನ್ನೊಳಗೊಂಡ "ಸಪ್ತಸ್ವರ ಸಂಗೀತ ತಂಡ" ಭಜನಾ ಕಾರ್ಯಕ್ರಮವು ಸರ್ವರ ಮನಸೂರೆಗೊಳ್ಳುವಂತೆ ಮಾಡಿತು.

ವಿದ್ವತ್ ವಿಶಾರದೆ ಶ್ರೀಮತಿ ಪಲ್ಲವಿ ನಾಯಕ, ಸಂಗೀತಪ್ರಿಯ ಶ್ರೀ ಕೃಷ್ಣಾ ಎಂ ರವರ ನೇತೃತ್ವದಲ್ಲಿ ಕಾಲೇಜಿನ ಸಂಗೀತ ಆಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವು ಭಜನಾ ಸಾಮಗ್ರಿಗಳೊಂದಿಗೆ ತೆರಳಿ ಸತತ ೨ ಘಂಟೆಗಳಕಾಲ ಕನ್ನಡ, ಮರಾಠಿ ಭಜನೆಗಳನ್ನು ಹಾಡಿ ಎಲ್ಲರ ಮೆಚ್ಚುಗೆ ಗಳಿಸಿತು.


ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಕೌಶಲ್ಯಗಳಿಗೆ ಉತ್ತಮ ವೇದಿಕೆಯನ್ನು ನೀಡಲು ಪ್ರಾರಂಭಿಸಿರುವ "ಸಪ್ತಸ್ವರ ಸಂಗೀತ ತಂಡ" ಕ್ಕೆ ಶುಭಕಾಮನೆಗಳು.


No comments:

Post a Comment