ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಬಿಎ ವಿದ್ಯಾರ್ಥಿಗಳಿಗೆ "ಭಟ್ಕಳದ ಇತಿಹಾಸ" ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ಶ್ರೀನಾಥ್ ಪೈ ಚಾಲನೆ ನೀಡಿ "ಸ್ಥಳೀಯ ಇತಿಹಾಸದ ಅರಿವು ಪ್ರತಿಯೊಬ್ಬರಿಗೂ ಇರಬೇಕೆನ್ನುವ ಸದುದ್ದೇಶದಿಂದ ಈ ವಿಶಿಷ್ಟ ಸಂವಾದದ ಮುದ್ರಿಕೆಗಳನ್ನು ಪ್ರಸ್ತುತ ನುಡಿಸುತ್ತಿರುವುದು ಶ್ಲಾಘನೀಯ" ಎಂದರು.
ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ "ಸ್ಥಳೀಯ ಇತಿಹಾಸದ ಪರಿಚಯ ಅಗತ್ಯ ಎನ್ನುವುದನ್ನು ಮನಗಂಡು ಹೊಸ ಶಿಕ್ಷಣ ನಿತಿಯನ್ವಯ ಈ ಚಟುವಟಿಕೆಯನ್ನು ಕೈಗೊಳ್ಳಲಾಗಿದೆ " ಎಂದರು.
ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ, ವಿದ್ವಾಂಸ ಡಾ.ಗಜಾನನ ಶರ್ಮ ಇವರ 'ಭಟ್ಕಳದ ಸ್ಥಳೀಯ ಇತಿಹಾಸ'ದ ಕುರಿತ ಸಂವಾದವನ್ನು ಪುನೀತ್ ರಾಜಕುಮಾರ್ ಚಲಿಸುವ ಭಾಷಾ ಪ್ರಯೋಗಾಲಯದ ಮೂಲಕ ಸಾದರಪಡಿಸಲಾಯಿತು. ಇತಿಹಾಸ ಉಪನ್ಯಾಸಕ ಕೃಷ್ಣ. ಎಂ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
No comments:
Post a Comment