Wednesday, February 15, 2023

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರ ಸಂಪನ್ನ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರಾಷ್ಟ್ರೀಯ ಸೇವಾ ಯೋಜನಾ ಕೋಶದ ಅಡಿಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ವಾರ್ಷಿಕ ಶಿಬಿರವು ಜಿಲ್ಲಾ ಪಂಚಾಯತ್ ಉತ್ತರಕನ್ನಡ, ತಾಲೂಕಾ ಪಂಚಾಯತ್ ಭಟ್ಕಳ, ಗ್ರಾಮ ಪಂಚಾಯತ್ ಕೊಪ್ಪ ಇವರ ಸಹಯೋಗದೊಂದಿಗೆ ದಿ 04 ರಿಂದ 10.02.2023 ರ ವರೆಗೆ ಭಟ್ಕಳದ ಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಕೂರ್ ನಲ್ಲಿ ಜರುಗಿತು.

"ನನಗಾಗಿ ಅಲ್ಲ ನಿನಗಾಗಿ", ಸಧೃಡ ದೇಶ ನಮ್ಮ ಉದ್ದೇಶ ಎಂಬ ಘೋಷ ವಾಕ್ಯದೊಂದಿಗೆ ಪ್ರಾರಂಭವಾದ ಶಿಬಿರವನ್ನು ಕೊಪ್ಪ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ರಾಜು ಮಂಜಪ್ಪ ನಾಯ್ಕ ಉದ್ಘಾಟಿಸಿದರು. 

ಸಂಪನ್ಮೂಲ ವ್ಯಕ್ತಿಗಳಾದ ಶ್ರೀ .ಎಂ.ಆರ್ ನಾಯ್ಕ, ಶ್ರೀ ಚಿದಾನಂದ ಪಟಗಾರ್, ಶ್ರೀ ಪ್ರಮೋದ್ ಜೋಷಿ, ವಿದ್ಯಾಂಜಲಿ ಶಾಲೆಯ ಶ್ರೀಮತಿ ಶೈಲಜಾ ಪ್ರಭು, ವಿದ್ಯಾಭಾರತಿ ಶಾಲೆಯ ರೂಪಾ ಖಾರ್ವಿ, ಟಿ.ಎನ.ಇ.ಪಿ.ಯು ಕಾಲೇಜಿನ ಡಾ.ವಿರೇಂದ್ರ ಶಾನಭಾಗ ರವರು ಉಪನ್ಯಾಸ ನೀಡಿದರು.

ಬ್ಲಾಕ್ ಶಿಕ್ಷಣಾಧಿಕಾರಿಗಳಾದ ಶ್ರೀ ದೇವಿದಾಸ್ ಮೊಗೇರ್, ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್  ಸಂಯೋಜನಾಧಿಕಾರಿಯಾದ ಡಾ. ಎಂ ಬಿ ದಳಪತಿ ಹಾಗೂ ಉತ್ತರಕನ್ನಡ ಜಿಲ್ಲಾ ಎನ್.ಎಸ್.ಎಸ್ ನೋಡೆಲ್ ಅಧಿಕಾರಿ ಪ್ರೋ. ಜಿ ಟಿ ಭಟ್ ರವರು ಶಿಬಿರಕ್ಕೆ ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. 

ಪ್ರತಿದಿನ ಮುಂಜಾನೆ ಯೋಗ ಶಿಕ್ಷಕ ಶ್ರೀ ಗೋವಿಂದ ದೇವಾಡಿಗರವರ ನೇತೃತ್ವದಲ್ಲಿ ಯೋಗ ತರಬೇತಿ, ಗಣ್ಯರಿಂದ ಧ್ವಜಾರೋಹಣ, ಚಿಂತನೆ ಪ್ರಸ್ತುತಿ, ಶ್ರಮದಾನ, ಜಾಗೃತಿ ಕಾರ್ಯಕ್ರಮಗಳು, ಸಂಜೆ ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು. ದಿವ್ಯಾಂಗ ವಿಧ್ಯಾರ್ಥಿ ಶಾಯಲ್ ತಂಡದಿಂದ ಸಂಗೀತ ಸಂಜೆ, ಕಾಲೇಜಿನ ಸಪ್ತಸ್ವರ ತಂಡದಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿ ಮ್ಯಾನೆಜರ್ ರಾಜೇಶ ಬಿ ನಾಯಕ್, ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ್ ಉಪಸ್ಥಿತರಿದ್ದು ಮಹಿಳಾ ಸಬಲೀಕರಣಕ್ಕೆ' ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು. 

ಉನ್ನತ ಭಾರತ ಅಭಿಯಾನದ ಅಡಿಯಲ್ಲಿ ಗ್ರಾಮದ ಸಮೀಕ್ಷೆ ಹಾಗೂ ಶಿಬಿರಾರ್ಥಿಗಳಿಂದ ಪರಿಸರದ ಜಾಗೃತಿ, ಆರೋಗ್ಯ, ಸ್ವಚ್ಛತೆ, ಪ್ಯಾಸ್ಟಿಕ್ಬಳಕೆಯ ಕುರಿತಾಗಿ ಜಾತಾ, ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ, "ಹಸಿರೇ  ಉಸಿರು" ತರಬೇತಿ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಸಮಾರೋಪ ಸಮಾರಂಭದಮುಖ್ಯ ಅತಿಥಿಯಾಗಿ ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಹೊನ್ನಯ್ಯ ಎಸ್ ಗೊಂಡ ಹಾಗೂ ಸದಸ್ಯರು ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಹರೀಶ ಜಿ. ಗೌಡ ಕಾಯ9ಕ್ರಮದ ಅಧ್ಯಕ್ಷತೆ ವಹಿಸಿದರು. ಸಮಾರೋಪ ಭಾಷಣವು ಪ್ರಾಚಾರ್ಯರಾದ ಶ್ರೀನಾಥ್ ಪೈ ರವರಿಂದ ನೆರವೇರಿತು. ಕಾಯ9ಕ್ರಮ ಅಧಿಕಾರಿಯಾದ ಶ್ರೀ ಶಾಂತರಾಯ ಗೊಂಡ, ಸಹ-ಕಾರ್ಯಕ್ರಮ ಅಧಿಕಾರಿ ಶ್ರೀ ವಿನಾಯಕ ನಾಯ್ಕರವರು, ಉಪನ್ಯಾಸಕರು, ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು.

 

No comments:

Post a Comment