Saturday, March 25, 2023

ಶ್ರೀ ಗುರು ಸುಧೀಂದ್ರ ಕಾಲೇಜಿನ - ದೇಶಪಾಂಡೆ ಸ್ಕಿಲ್ಲಿಂಗ್ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಕಾರ್ಯಕ್ರಮ

ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತ ಯುವ ಮತದಾರರಲ್ಲಿ ಮತದಾನದ ಅರಿವು ಮೂಡಿಸಲು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ಹಾಗೂ ಕೌಶಲ್ಯಾಭಿವೃದ್ಧಿ ಒಡಂಬಡಿಕೆ ಹೊಂದಿದ ಸಂಸ್ಥೆಯಾದ ದೇಶಪಾಂಡೆ ಸ್ಕಿಲ್ಲಿಂಗ್ ನ ವಿದ್ಯಾರ್ಥಿಗಳಿಂದ ವಿಭಿನ್ನವಾದ ಜಾಗೃತಿ ಕಾರ್ಯಕ್ರಮವು ಜರುಗಿತು. 

ಕಾಲೇಜಿನ ಮೈದಾನದಲ್ಲಿ "ಮತದಾನ ಮಾಡೋಣ" , "ಲೆಟ ಅಸ್ ವೋಟ" ಮುಂತಾದ ಭಿತ್ತಿಚಿತ್ರವನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ನಾವು ಮತದಾನ ಮಾಡುವೆವು ಎಂದು ಪ್ರತಿಜ್ಞೆ ಸ್ವೀಕರಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಶ್ರೀನಾಥ ಪೈ, ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಪ್ರಥಮ ಬಾರಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತಲಿದ್ದು , ಕೌಶಲ್ಯಾಭಿವೃದ್ಧಿ ಶಿಕ್ಷಣವನ್ನು ಪಡೆಯುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳ "ಬ್ಲೂ-ಆರ್ಮಿ" ತಂಡದ ವಿದ್ಯಾರ್ಥಿನಿಯರು ಮತದಾನದ ಮಹತ್ವವನ್ನು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರು, ಕಾಲೇಜು ಇ.ಎಲ್.ಸಿ ಕ್ಲಬ್ ಸಂಯೋಜಕರಾದ ಸುಬ್ರಮಣ್ಯ ನಾಯ್ಕ, ತರಬೇತುದಾರರಾದ ಸೆಸಿಲಿಯಾ ಪಿಂಟೋ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

No comments:

Post a Comment