Thursday, April 6, 2023

“ಸ್ವಾನಂದಾಮೃತ” - ಶ್ರೀ ಶ್ರೀಧರ ಸ್ವಾಮೀಜಿಗಳ ಕುರಿತ ಪುಸ್ತಕಗಳ ಸಂಗ್ರಹ ಉದ್ಘಾಟನೆ


ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಶ್ರೀ ಶ್ರೀಧರ ಸ್ವಾಮೀಜಿಗಳ ೫೦ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಶ್ರೀಧರ ಸ್ವಾಮೀಜಿಗಳ ಕುರಿತ ಪುಸ್ತಕಗಳ ಸಂಗ್ರಹವನ್ನು ಶ್ರೀ ನಾಗಯಕ್ಷೇ ಧರ್ಮ ದೇವಿ ಸಂಸ್ಥಾನದ ಶ್ರೀ ರಾಧಾಕೃಷ್ಣ ಗೋಪಾಲ ಪ್ರಭು ರವರು   ಉದ್ಘಾಟಿಸಿದರು.

ಉದ್ಘಾಟಕರ ಮಾತು: ಶ್ರೀ ರಾಧಾಕೃಷ್ಣ ಗೋಪಾಲ ಪ್ರಭು - "ಶ್ರೀ ಶ್ರೀಧರ ಸ್ವಾಮೀಜಿಗಳ ಚರಿತ್ರೆ, ಶ್ಲೋಕಗಳ ಅಧ್ಯಯನವು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕ್ರತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು “ಸ್ವಾನಂಧಾಮೃತ” ಕನ್ನಡ-ಇಂಗ್ಲೀಷ ಪುಸ್ತಕಗಳ ಸಂಗ್ರಹದ ಉಪಯೋಗವನ್ನು ಪಡೆಯಬೇಕು" ಎಂದರು.

ಅಧ್ಯಕ್ಷರ ಮಾತು: ಡಾ.ಸುರೇಶ ವಿ ನಾಯಕ - "ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಫ್, ಕಾಲೇಜು ಕ್ಯಾಂಪಸನಲ್ಲಿ ಸುಸಜ್ಜಿತ ಶ್ರೀ ಶ್ರೀಧರ ಸ್ವಾಮಿ ಸಭಾಗೃಹವನ್ನು ಧಾನ ರೂಪದಲ್ಲಿ ನೀಡಿದ ಶ್ರೀ ನಾಗಯಕ್ಷೇ ಧರ್ಮ ದೇವಿ ಸಂಸ್ಥಾನವು ಕೆರೆಯ ನೀರು ಕೆರೆಗೆ ಚೆಲ್ಲಿ ಎನ್ನುವ ಮಾತಿನಂತೆ ಸಮಾಜದಲ್ಲಿ ಶಿಕ್ಷಣದ ಮೂಲಕ ಬದಲಾವಣೆ ತರಲು ಸಹಕಾರಿಯಾಗುತ್ತಿದೆ" ಎಂದರು 

ಕಾಲೇಜು ಪ್ರಾಚಾರ್ಯರಾದ ಶ್ರೀ ಶ್ರೀನಾಥ ಎಸ್ ಪೈ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಂಥಪಾಲಕಿ ಶ್ರೀಮತಿ ರಶ್ಮೀ ನಾಯ್ಕ ವಂದಿಸಿದರು.

ಉಪ-ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


No comments:

Post a Comment