Friday, April 21, 2023

ಪದ್ಮಶ್ರೀ ಡಾ. ಕಿರಣ ಸೇಥ್ರ ಸೈಕಲ್ ಯಾತ್ರೆಯ ಭಟ್ಕಳ ಪುರಪ್ರವೇಶ.

ಐ.ಐ.ಟಿ ಯ ನಿವೃತ್ತ ಉಪನ್ಯಾಸಕ, ಸ್ಪೈಕ್ ಮೆಕೆ ಸಂಸ್ಥೆಯ ಸ್ಥಾಪಕ ಪದ್ಮಶ್ರೀ ಡಾ. ಕಿರಣ ಸೇಥ್ರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ ಯಾತ್ರೆಯು 23 ಎಪ್ರಿಲ್ 2023ರ ಭಾನುವಾರ ಬೆಳಿಗ್ಗೆ 10 ಘಂಟೆಗೆ ಭಟ್ಕಳ ಪುರಪ್ರವೇಶವಾಗಲಿದೆ. ಪರಿಸರ ಸಂರಕ್ಷಣೆ & ಭಾರತೀಯ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸುವ ಈ ವಿಶೇಷ ಸೈಕಲ್ ಯಾತ್ರೆಯ ರುವಾರಿ ಪದ್ಮಶ್ರೀ ಡಾ. ಕಿರಣ ಸೇಥ್ರವರನ್ನು ಭಟ್ಕಳದಲ್ಲಿ ಸ್ವಾಗತಿಸಿ, ತದನಂತರ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ರೋಟರಿ, ರೊಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

No comments:

Post a Comment