ಭಟ್ಕಳ: ಮೇ 10 ರಂದು ಜರಗುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಸಾರ್ವಜನಿಕರಲ್ಲಿ ಮತದಾನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿ.ಎ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಮತದಾನ ಸಾಕ್ಷರತಾ ಕ್ಲಬ್, ಎನ್.ಎಸ್.ಎಸ್ ಘಟಕ, ಭಟ್ಕಳ ತಾಲೂಕಾ ಆಡಳಿತ-ಸ್ವೀಪ್ ಘಟಕದ ಸಹಯೋಗದೊಂದಿಗೆ ರಚಿಸಿದ ಎರಡು ಕಿರುಚಿತ್ರಗಳನ್ನು ತಾಲೂಕಿಕ ಹಿರಿಯ ವೈದ್ಯರೂ, ಟ್ರಸ್ಟ್ನ ಅಧ್ಯಕ್ಷರೂ ಆದ ಡಾ.ಸುರೇಶ ವಿ ನಾಯಕ ರವರು ಉದ್ಘಾಟಿಸಿದರು. ಮತದಾನ ನಮ್ಮ ಹಕ್ಕು, ಯುವ ಮತದಾರರು ಮತದಾನದ ಮಹತ್ವವನ್ನು ಅರಿತು ಸಾರ್ವಜನಿಕರಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ಜನತೆಗೆ ತಿಳಿಯಪಡಿಸಬೇಕು ಎಂದರು.
ಪ್ರಾಂಶುಪಾಲರಾದ ಶ್ರೀನಾಥ ಪೈ, ಕಿರುಚಿತ್ರದಲ್ಲಿ ನಟಿಸಿದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಕೀರ್ತಿರಾಜ ನಾಯ್ಕ, ರಾಜೇಶ ನಾಯ್ಕ, ನಾಗಪ್ಪಯ್ಯ ಪೈ, ಪಲ್ಲವಿ ಜೈನ, ಸಿದ್ದಾರ್ಥ ಮಯ್ಯ, ಚಿತ್ರೀಕರಣ ಎಡಿಟಿಂಗ್ ಮಾಸ್ಟರ ಯೋಗಿರಾಜ ನಾಯ್ಕ ರವರಿಗೆ ಸ್ಮರಣಿಕೆ ವಿತರಿಸಿದರು. ಉಪಪ್ರಾಂಶುಪಾಲರಾದ ಪಿ.ಎಸ.ಹೆಬ್ಬಾರ, ಉಪನ್ಯಾಸಕರಾದ ಕೃಷ್ಣ ಮೊಗೇರ, ಆನಂದ ದೇವಾಡಿಗ, ಶಾಂತರಾಯ ಗೊಂಡ, ವಿನಾಯಕ ನಾಯ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
No comments:
Post a Comment