ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ನಡೆಸಿದ ಬಿಸಿಎ ಐದನೇ ಸೆಮೆಸ್ಟರ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ಶೇ. 99 ಫಲಿತಾಂಶ ಪಡೆದಿರುತ್ತದೆ.
ರಕ್ಷಾ ಫಾಯದೇ ಶೇ.92.60, ದೀಕ್ಷಾ ಖಾರ್ವಿ ಶೇ.92.20, ವೀಣಾ ಪಟಗಾರ ಶೇ.91.00, ಪಲ್ಲವಿ ಹೆಗಡೆ ಶೇ.90.40, ತೇಜಸ್ವಿನಿ ನಾಯ್ಕ ಶೇ.88.80 ಪಡೆದಿರುತ್ತಾರೆ. 56 ವಿದ್ಯಾಥರ್ಿಗಳು ಡಿಸ್ಟಿಂಕ್ಷನ್, 18 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷರರಾದ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ಶ್ರೀ ರಾಜೇಶ ಬಿ ನಾಯಕ, ಟ್ರಸ್ಟಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
No comments:
Post a Comment