ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಶ್ರೀ ಗುರು ವಿದ್ಯಾಧಿರಾಜ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ನೂತನ ಗ್ರಂಥಾಲಯ, ಕೊಠಡಿಗಳ ಸಮುಚ್ಛಯ ಹಾಗೂ ಇನ್ಫೋಸಿಸ್ ಫೌಂಡೇಶನ ಬ್ಲಾಕ್ನ ನೂತನ ಮೂರನೇ ಮಹಡಿ, ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಕಂಪ್ಯೂಟರ್, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.
ಈ ಸಂದರ್ಭದಲ್ಲಿ ಟ್ರಸ್ಟಿ ಪ್ರದೀಪ ಜಿ. ಪೈ ಸರ್ವರನ್ನು ಸ್ವಾಗತಿಸುತ್ತ, ಪ್ರಾಸ್ತಾವಿಕವಾಗಿ ಮಾತನಾಡಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ ನಡೆದುಬಂದ ದಾರಿ ಹಾಗೂ ಇದರ ಮುನ್ನೋಟವನ್ನು ಪ್ರಸ್ತುತಪಡಿಸಿದರು.
ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮಿಜಿಗಳು ತಮ್ಮ ಆಶೀರ್ವಚನದಲ್ಲಿ "ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಕಾರ್ಯವನ್ನು ಶ್ಲಾಘಿಸುತ್ತ, ವ್ಯಕ್ತಿಯಲ್ಲಿರುವ ಕೌಶಲ್ಯ-ಪ್ರತಿಭೆಗೆ ಗೌರವವನ್ನು ನೀಡಬೇಕು ಎಂದು ಹೇಳಿದರು. ಐತಿಹಾಸಿಕ ಉದಾಹರಣೆಗಳ ಮೂಲಕ ಹಣಕ್ಕಿಂತ ವಿದ್ಯೆಯೇ ಮುಖ್ಯ, ವಿದ್ಯೆಯಲ್ಲಿ ನೈತಿಕ ಮೌಲ್ಯ ಅಳವಡಿಸಿಕೊಂಡಾಗ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ ಆದಕಾರಣ ನೈತಿಕ ಮೌಲ್ಯವನ್ನು ಅಳವಡಿಸಿಕೊಳ್ಳಿ" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಉಪಾಧ್ಯಕ್ಷರಾದ ಸುರೇಂದ್ರ ಶ್ಯಾನುಭಾಗ, ಆಡಳಿತ ಟ್ರಸ್ಟಿ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಟ್ರಸ್ಟಿಗಳಾದ ನಾಗೇಶ ಭಟ್, ಶ್ರೀಧರ ಶ್ಯಾನುಭಾಗ, ರಮೇಶ ಖಾರ್ವಿ, ಗುರುದತ್ತ ಶೇಟ್ ಹಾಗೂ ಟ್ರಸ್ಟಿನ ಎಲ್ಲ ಅಂಗ ಸಂಸ್ಥೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಕಾಲೇಜಿನ ಸಪ್ತಸ್ವರ ಸಂಗೀತ ತಂಡದವರು ಪ್ರಾರ್ಥಿಸಿದರೆ, ಶ್ರೀನಾಥ ಪೈ ಹಾಗೂ ವಿಶ್ವನಾಥ ಭಟ್ಟ ನಿರೂಪಿಸಿದರು.
No comments:
Post a Comment