ಭಟ್ಕಳ ಜನವರಿ 4: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಅಂತರ ಪದವಿ ಪೂರ್ವ ಕಾಲೇಜು ಮಟ್ಟದ ಶೈಕ್ಷಣಿಕ & ಸಾಂಸ್ಕೃತಿಕ ಸ್ಪರ್ಧೆ (ಫೆಸ್ಟ್) ಸೃಷ್ಟಿ 2024 ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಭಟ್ಕಳದ ಸ್ನೇಹ ವಿಶೇಷ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಮಾಲತಿ ಉದ್ಯಾವರ ರವರು ಮಾತನಾಡಿ " "ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು" ಅಲ್ಲದೆ ತಮ್ಮ ಸಾಧನೆಗೆ ಕಾರಣವಾದ ವಿಷಯವನ್ನು ನೆನಪಿಸಿಕೊಂಡು ಮಕ್ಕಳಿಗೆ ಪ್ರೇರಣೆ ನೀಡಿದರು. ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಮಾತನಾಡಿ " ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಥರ್ಿಗಳು ಕೌಶಲ್ಯಗಳನ್ನು ವೃದ್ದಿಸಿಕೊಳ್ಳಬೇಕು ಎಂದು ತಿಳಿಸಿ ಶುಭಹಾರೈಸಿದರು". ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಅಧ್ಯಕ್ಷರಾದ ಡಾ. ಸುರೇಶ ನಾಯಕ ಮಾತನಾಡಿ "ಇಂತಹ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ, ವಿದ್ಯಾಥರ್ಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು" ಎಂದು ಕಿವಿಮಾತು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ ಭಟ್ಕಳದ ವಿದ್ಯಾಂಜಲಿ ಶಾಲೆಯ ಉಪ-ಪ್ರಾಂಶುಪಾಲರಾದ ರಾಘವೇಂದ್ರ ಕಾಮತ ರವರು "ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಸರ್ವಾಂಗೀಣ ಪ್ರಗತಿಯನ್ನು ಸಾಧಿಸಬೇಕು" ಎಂದು ತಿಳಿಸಿದರು.
ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿದರೆ, ಬಿ.ಕಾಂ ವಿಭಾಗದ ಉಪನ್ಯಾಸಕಿ ದೀಪಾ ನಾಯ್ಕ ವಂದಿಸಿದರು. ವಿದ್ಯಾಥರ್ಿಗಳು ನಿರೂಪಿಸಿದರು. ಕರಾವಳಿಯ ಹಲವಾರು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ಸುಸಂಪನ್ನಗೊಂಡಿತು. ಸೃಷ್ಟಿ 2024ರ ವೀರಾಗೃಣಿ ಪ್ರಶಸ್ತಿಯನ್ನು ಬೈಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪಡೆದುಕೊಂಡಿತು.
No comments:
Post a Comment