ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಬಿಎ ವಿಭಾಗದ ವತಿಯಿಂದ 'ಬಿಜ್ ಡೊಕ್ ೨೦೨೪' ವಿನೂತನ ಪ್ರೀಮಿಯರ್ ಪ್ರದರ್ಶನ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿOದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಅಧ್ಯಕ್ಷರಾದ ಡಾ. ಸುರೇಶ ನಾಯಕ ಮಾತನಾಡಿ "ಇಂತಹ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಈ ಭಾಗದ ವ್ಯವಹಾರಸ್ಥರು ಪಾಲ್ಗೊಂಡಿರುವುದು ಸಂತಸದ ವಿಷಯ" ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಮಾತನಾಡಿ "ಸರ್ವಾಂಗೀಣ ಪ್ರಗತಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಅಗತ್ಯ ಎಂದು ತಿಳಿಸಿ" ಹೇಳಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಟ್ರಸ್ಟಿ ನಾಗೇಶ ಭಟ್ಟ ಮಾತನಾಡಿ "ವಿದ್ಯಾರ್ಥಿಗಳು ಪಠ್ಯದೊಂದಿಗೆ, ಹೆಚ್ಚಿನ ಚಟುವಟಿಕೆ ಗಳಲ್ಲಿಪಾಲ್ಗೊಳ್ಳುವುದರಿಂದ ಕೌಶಲ್ಯವಂತರಾಗಲು ಸಾಧ್ಯ" ಇಂದು ತಿಳಿಸಿದರು.
ಶ್ರೀಹರ್ಷ ಎಲೆಕ್ಟಾçನಿಕ್ಸ್, ಎಲ್.ಎನ್.ಆರ್ ಮಿಲ್ಸ್, ನ್ಯೂ ಸಮ್ಮರ್, ಕೊಂಫಿ, ರಿಬ್ಬನ್ಸ್ & ಬಲೂನ್ಸ್, ಪ್ರಭು ಟ್ರೇರ‍್ಸ್, ಹೊಟೇಲ್ ಪ್ರಾರ್ಥನಾ, ರಾಯಲ್ ಓಕ್, ಸೆಲೆಕ್ಷನ್ ಸೆಂಟರ್, ಎಸ್.ಎಂ ಮೊಡ್ಯುರ‍್ಸ್ ಹೀಗೆ ಹತ್ತು ಉದ್ದಿಮೆದಾರರು ಉಪಸ್ಥಿತರಿದ್ದು, ಅವರ ಸಮ್ಮುಖದಲ್ಲಿ ಅವರ ಉದ್ದಿಮೆಯ ಕುರಿತ ಸಾಕ್ಷö್ಯಚಿತ್ರವನ್ನು ಪ್ರದರ್ಶಿಸಲಾಯಿತು. ಉದ್ದಿಮೆದಾರರು ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಶ್ರಮವನ್ನು ಬಹುವಾಗಿ ಮೆಚ್ಚಿಕೊಂಡರು.
ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿ ಕಾರ್ಯಕ್ರಮದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಬಿ.ಬಿ.ಎ ವಿಭಾಗದ ಚಟುವಟಿಕೆಗಳ ಹಿನ್ನೋಟ -ಮುನ್ನೋಟವನ್ನು ಪ್ರಸ್ತುತ ಪಡಿಸಿದರು. ಉಪನ್ಯಾಸಕಿ ಐಶ್ವರ್ಯ ವಂದಿಸಿದರೆ, ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಮಾರ್ಥಾ ಹಾಗೂ ಸೃಷ್ಠಿ ನಿರೂಪಿಸಿದರು.
No comments:
Post a Comment