Thursday, September 26, 2024

ಕರ್ನಾಟಕ ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮ 2024

ಕರ್ನಾಟಕ ವಿಶ್ವವಿದ್ಯಾಲಯದ 2024 ನೇ ಸಾಲಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ, 2023-24 ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ BBA ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವೃಂದಾ ಆರ್ ಜೋಗಿ ( ಭಟ್ಕಳದ ಶ್ರೀಮತಿ ವೀಣಾ ಹಾಗೂ ಶ್ರೀ ರಾಮನಾಥ ಜೋಗಿಯವರ ಸುಪುತ್ರಿ ) ಯವರಿಗೆ ಬಂಗಾರದ ಪದಕ ಸಹಿತ ರ‍್ಯಾಂಕ್ ಫಲಕವನ್ನು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಮ್.ಸಿ.ಸುಧಾಕರ ಸಹಿತ ಗಣ್ಯರು ಪ್ರಧಾನ ಮಾಡಿದರು.

ಕರ್ನಾಟಕ ವಿಶ್ವವಿದ್ಯಾಲಯ 2023 ರಲ್ಲಿ ನಡೆದ BCA ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ಖಾರ್ವಿಯವರು ಶೇ 91.73 ಪಡೆದು ಕರ್ನಾಟಕ ವಿಶ್ವವಿದ್ಯಾಲಯದ ಬಿಸಿಎ ವಿಭಾಗದಲ್ಲಿ ತೃತೀಯ ರ‍್ಯಾಂಕ್ ಪಡೆದಿರುತ್ತಾರೆ. ಭಟ್ಕಳದ ಶ್ರೀಮತಿ ಮಂಗಲಾ ಹಾಗೂ ಶ್ರೀ ನಾಗಪ್ಪಾ ಖಾರ್ವಿಯವರ ಸುಪುತ್ರಿಯಾಗಿದ್ದು, ಈ ವಿದ್ಯಾರ್ಥಿನಿಯ ಅನುಪಸ್ಥಿತಿಯಲ್ಲಿ ಆಕೆಯ ಪರವಾಗಿ ಆಕೆಯ ಮಾತೆಯನ್ನು ಸನ್ಮಾನಿಸಲಾಯಿತು.

ಕರ್ನಾಟಕ ವಿಶ್ವವಿದ್ಯಾಲಯದ 2024 ನೇ ಸಾಲಿನ ಘಟಿಕೋತ್ಸವ ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ B.Com ಕೋರ್ಸನಲ್ಲಿ ಅತ್ಯಧಿಕ ಅಂಕ ಪಡೆದ ನಮ್ಮ ಕಾಲೇಜಿನ B.Com ವಿದ್ಯಾರ್ಥಿನಿ, ಶ್ರೀಮತಿ ರೇಖಾ ಮತ್ತು ಶ್ರೀ ರಾಜೇಂದ್ರ ಕಾಮತ ರವರ ಪುತ್ರಿ, ನಮ್ಮೆಲ್ಲರ ಹೆಮ್ಮೆಯ ಪ್ರತಿಭೆ ಕುಮಾರಿ. ಮಹಾಲಕ್ಷ್ಮಿ ಕಾಮತ ಇವರಿಗೆ Wr. D C Pawate Diamond Jubilee Celebration Fund Scholarship ಅನ್ನು ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರ ಸಹಿತ ಗಣ್ಯರು ಪ್ರಧಾನ ಮಾಡಿದರು.

ಅಭಿನಂದನೆಗಳು

ಆಡಳಿತ ಮಂಡಳಿ ಭಟ್ಕಳ ಏಜುಕೇಶನ್ ಟ್ರಸ್ಟ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಶ್ರೀ ಗುರು ಸುಧೀಂದ್ರ ಕಾಲೇಜು, ಭಟ್ಕಳ.

No comments:

Post a Comment