ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ನಡೆಸಿದ ಪದವಿ ಕೋರ್ಸನ ಅಂತಿಮ ಸೆಮೆಸ್ಟರ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ಶೇ. 94 ಫಲಿತಾಂಶ ಪಡೆದಿರುತ್ತದೆ.
ಬಿ.ಕಾಂ ವಿಭಾಗದಲ್ಲಿ ಸಂಗೀತಾ ಮಾದೇವ್ ನಾಯ್ಕ 9.83, ಬಿಸಿಎ ವಿಭಾಗದಲ್ಲಿ ಮಧುರ ಎಂ ನಾಯ್ಕ 9.85, ಬಿಬಿಎ ದಿವ್ಯಾ ಸುದೇಶ್ ನಾಯ್ಕ 9.23 ಎಸ್.ಜಿ.ಪಿ.ಎ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷರಾದ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ಶ್ರೀ ರಾಜೇಶ ಬಿ ನಾಯಕ, ಟ್ರಸ್ಟಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
No comments:
Post a Comment