ಭಟ್ಕಳ: "ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು" ಎಂದು ರೋಟಾರಿಯನ್ ರೋ.ಡಾ.ಗೌರೀಶ್ ಪಡುಕೋಣೆ ಹೇಳಿದರು.
ನಗರದ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ ಘಟಕವಾದ ರೋಟರಾಕ್ಟ್ ಕ್ಲಬ್ ಹಾಗೂ ಆನಂದಾಶ್ರಮ, ಶ್ರೀವಲಿ ಹಾಗೂ ವಿದ್ಯಾಂಜಲಿ ಶಾಲೆಯ 2024-25ನೇ ಸಾಲಿನ ಇಂಟರಾಕ್ಟ್ ಕ್ಲಬ್‌ಗಳ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, "ಪ್ರಪಂಚದ ೧೮೦ ದೇಶಗಳಲ್ಲಿ ಸುಮಾರು ಹನ್ನೊಂದು ಸಾವಿರ ರೋಟರಾಕ್ಟ್ ಕ್ಲಬ್‌ಗಳಿದ್ದು ಅವು ಎರಡು ಲಕ್ಷ ಸದಸ್ಯರನ್ನು ಹೊಂದಿವೆ ಮತ್ತು ಅವರೆಲ್ಲರೂ ತಮ್ಮ ಸೇವೆಯ ಮೂಲಕ ಇತರರ ಜೀವನದಲ್ಲಿ ಬದಲಾವಣೆಯನ್ನು ತರಲು ಪರಿಶ್ರಮಿಸುತ್ತಿದ್ದಾರೆ" ಎಂದರು.ರೋಟರಾಕ್ಟ್ ನಿಕಟಪೂರ್ವ ಅಧ್ಯಕ್ಷೆ ವೈಷ್ಣವಿ ನಾಯ್ಕ್ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಜ್ಞಾ ಗೋಳಿ 2023-24ನೇ ಸಾಲಿನಲ್ಲಿ ಜರುಗಿದ ರೋಟರಾಕ್ಟ್ ಚಟುವಟಿಕೆಗಳ ಕುರಿತಾಗಿ ವರದಿ ವಾಚಿಸಿದರು, ಸದಸ್ಯರಾದ ಪವಿತ್ರ ನಾಯ್ಕ್ ಮತ್ತು ವಿನುತಾ ನಾಯ್ಕ್ ನಿರೂಪಿಸಿ ವ೦ದಿಸಿದರು.
No comments:
Post a Comment