ಭಟ್ಕಳ: ಗುರು ಪುರ್ಣಿಮೆ- 2025 ರ ಅಂಗವಾಗಿ ಜುಲೈ ತಿಂಗಳ ಆಷಾಢ ಮಾಸದ ಪುರ್ಣಿಮೆಯಂದು ಭಟ್ಕಳದ ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಶ್ರೀ ಗುರುಗಳಿಗೆ ನಮನ ಸಲ್ಲಿಸಲಾಯಿತು.
ಅಧ್ಯಕ್ಷರಾದ ಡಾ.ಸುರೇಶ ನಾಯಕ ರವರು ಶ್ರೀ ಸಂಸ್ಥಾನ ಕಾಶೀಮಠದ ೨೦ನೇ ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಪುಷ್ಪ ನಮನ ಸಲ್ಲಿಸಿ "ಭಾರತೀಯ ಜ್ಞಾನ ವ್ಯವಸ್ಥೆಗೆ Indian Knowledge System - IKS ಪೂರಕವಾದ ಸಂಗೀತ | ಸಾಹಿತ್ಯ | ಸಂಸ್ಕ್ರತಿಯ ಕುರಿತ ಪುಸ್ತಕಗಳ ಅನಾವರಣ" ವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಎಜ್ಯುಕೇಶನ ಟ್ರಸ್ಟ್ ಅಧ್ಯಕ್ಷರು ಮಾತನಾಡಿ ಶ್ರೀಗಳ ಆಶೀರ್ವಾದದಿಂದ ಕಾಲೇಜು ಅಭಿವೃದ್ಧಿಯನ್ನು ಕಾಣುತ್ತಿದೆ ಎಂದು ಗುರುಗಳನ್ನು ಸ್ಮರಿಸಿದರು.
ಕಾಲೇಜಿನ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ನ T. VIMALA V. PAI E-LIBRARY ಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪ-ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
No comments:
Post a Comment